Posts

ಕನ್ಯೆಯನ್ನ ದಾನ ಮಾಡ್ಬೇಕಾ??

ಸ್ವಲ್ಪ ಹಳೆ ಕನ್ನಡ ಚಿತ್ರಗಳನ್ನ ನೋಡಿದ್ರೆ, ತುಂಬಾ ಪರಿಚಿತ ಸಂಭಾಷಣೆ ಅಂದ್ರೆ, “ನಾವು ಹೆಣ್ಣು ಹೆತ್ತೋರಪ್ಪ.. ನಮ್ ಕಷ್ಟ ನಮಿಗ್ ಗೊತ್ತು… “, “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು..”, “ನನ್ನ ಮಗಳನ್ನ ಮದುವೆ ಆಗಿ, ಅವಳಿಗೊಂದು ಬಾಳು ಕೊಡಿ..” ಇತ್ಯಾದಿ.. ಈ ರೀತಿ ಚಿತ್ರಗಳನ್ನ ನೋಡುತ್ತಿದ್ದಾಗ ನಮ್ಮದು ಪುರುಷ ಪ್ರಧಾನ ಸಮಾಜ ಅನ್ನೋದು ಖಾತ್ರಿ ಆಗುತ್ತೆ. ಹೆಣ್ಣು ಹೆತ್ತ ಮಾತ್ರಕ್ಕೆ ಇಷ್ಟೆಲ್ಲಾ ಕಷ್ಟ ಇರತ್ತ ಅಂತೆಲ್ಲ ಯೋಚ್ನೆ ಮಾಡ್ತಿದ್ದೆ. ನಮ್ಮ ಅಕ್ಕಂದಿರ ಮದುವೆ ಮಾಡುವಾಗಲೂ ನಮ್ಮ ಕಡೆಯವರೇ ಛತ್ರ ಗೊತ್ತು ಮಾಡ್ಬೇಕು, ಅಡುಗೆಯವರನ್ನ ಗೊತ್ತುಮಾಡಬೇಕು, ಎಲ್ಲ ಖರ್ಚು ನಮ್ಮದೇ ಇತ್ಯಾದಿ ಮಾತುಗಳನ್ನ ಕೇಳುತ್ತಿದ್ದೆ. ಭಾವನೂ ಮದ್ವೆ ಆಗ್ತಿಲ್ವಾ? ಅವರು ಯಾಕೆ ಅರ್ಧ ಖರ್ಚು ಹಾಕ್ಬಾರ್ದು ಅಂತ ನಾ ಕೇಳ್ದಾಗ, ನಮ್ಮ ದೊಡ್ಡಮ್ಮ ಹೇಳಿದ್ದು ಅದೇ.. “ನಾವು ಹೆಣ್ಣಿನ ಕಡೆಯವರಲ್ವಾ, ನಾವೇ ಎಲ್ಲ ಮಾಡ್ಬೇಕು” ಅಂತ. ಈ ಮಧ್ಯೆ ಇನ್ನಷ್ಟು ಹಳೆಯ ಚಿತ್ರಗಳು, ಮುಂಚಿನ ಕಾಲದ ಜನಜೀವನ ಬಿಂಬಿಸುವ ಕೆಲವು ಪುಸ್ತಕಗಳು, ಚಿತ್ರಗಳು, ಧಾರಾವಾಹಿಗಳನ್ನ ನೋಡುತ್ತಿದ್ದೆ. ಒಂದು ವಿಷಯ ಖಚಿತ ಆಗಿದ್ದು, ಗಂಡಿನ ಕಡೆಯವರು ಹೆಣ್ಣಿನ ಮನೆಗೆ ಹೋಗಿ, ಹೆಣ್ಣನ್ನು ನೋಡಿ, ಅವರ ಮನೆಯಲ್ಲೇ ವಿವಾಹ ಶಾಸ್ತ್ರ ಮುಗಿಸಿ, ಹೆಣ್ಣನ್ನು ಕರೆದುಕೊಂಡು ಹೋಗೋದು ವಾಡಿಕೆ ಅನ್ನೋ ವಿಷಯ. ಆದರೆ ಗಂಡಿನ ಮನೆಗೆ ಬಂದು ಹೆಣ್ಣನ್ನು ಮದುವೆ ಮಾಡಿಕೊಟ್ಟ ವಿಷಯಗಳನ್ನೇಕೋ ಯಾರು ಚಿತ್ರಿ

ಮಗುವಿಗೇಕೆ ತಂದೆಯ ಗೋತ್ರ ? Why does a child get his dad’s gothra? Why this bias?

Image
ನೆನ್ನೆ ತಾನೇ ಮಹಿಳೆಯರ ದಿನಾಚರಣೆ ಮಾಡಿ, ಒಂದು ಕಡೆ ಹೆಣ್ಣಿಗೇಕೆ ಗಂಡಿನ ವಂಶದ ನಾಮಫಲಕ ತಗುಲಿ ಹಾಕ್ಬೇಕು ಎಂಬ ಪ್ರಶ್ನೆ ನೋಡಿದೆ. ಅಂದ್ರೆ, ಹೆಣ್ಣು ಮದುವೆ ಆದನಂತರ ತನ್ನ ಗಂಡನ Family name or surname ನ ತನ್ನ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಾಳೆ. ಅದೇಕೆ? ನಾನು ಸ್ವಲ್ಪ ವರ್ಷಗಳ ಮುಂಚೆ ಇದೆ ರೀತಿ, ತಂದೆಯ ಗೋತ್ರವನ್ನೇಕೆ ಮಗುವಿಗೆ ಅಂಟಿಸುತ್ತಾರೆ? ತಾಯಿಯದ್ದಲ್ಲ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ… ಆ ಕಥೆ ಹೀಗಿದೆ: ನಮ್ಮ ಮನೆಯಲ್ಲಿ ಯಾರದ್ದಾದರೂ ಹುಟ್ಟು ಹಬ್ಬ ಬಂದ್ರೆ, ಅಥವಾ ವಿಶೇಷ ದಿನ ಬಂದರೆ ದೇವಸ್ಥಾನದಲ್ಲಿ ಅಭಿಷೇಕಕ್ಕೆ ಕೊಡೊ ರೂಢಿ. ಅಂತೆಯೇ, ಒಮ್ಮೆ ನನ್ನ ಅಣ್ಣನ ಹುಟ್ಟು ಹಬ್ಬ ಇದ್ದ ಸಂದರ್ಭ. ಅಮ್ಮ ದೇವಸ್ಥಾನದಲ್ಲಿ ಅಭಿಷೇಕಕ್ಕೆ ಬರ್ಸಿ ಬಾ ಅಂದ್ರು. ನಾನು ನನ್ನ ತಂದೆಯ ಹೆಸರು, ತಾಯಿಯ ಹೆಸರು, ಅಣ್ಣನ ಹೆಸರು ಮತ್ತು ನನ್ನ ಹೆಸರು, ನಮ್ಮೆಲ್ಲ ನಕ್ಷತ್ರಗಳನ್ನ ಬರೆಸಿದ್ದೆ. ಗೋತ್ರ ಅಂದಾಗ ಕೌಂಡಿನ್ಯ ಗೋತ್ರ ಅಂದೇ. ಆದರೆ ಮನೆಗೆ ಬರುವ ದಾರಿಯಲ್ಲಿ ಒಂದು ಗೊಂದಲ. ನಮ್ಮ ಮಾವನ (ಅಮ್ಮನ ತಮ್ಮ) ಗೋತ್ರ ಶ್ರೀವತ್ಸ ಗೋತ್ರ ಅಂದಿದ್ದ ನೆನಪು. ಅಂದರೆ ಅಮ್ಮನ ಗೋತ್ರವು ಶ್ರೀವತ್ಸ ಗೋತ್ರವೇ ಅಲ್ವಾ? ನಾನ್ಯಾಕೆ ಎಲ್ಲರದ್ದೂ ಕೌಂಡಿನ್ಯ ಅಂದೇ? ನಾನು ತಪ್ಪು ಬರ್ಸಿದ್ನ ಅಂತ ತಲೆ ಕೆರ್ಕೋತಿದ್ದೆ. ಮನೆಗೆ ಬಂದು ಅಮ್ಮನ್ನು ಕೇಳ್ದೆ. ನಿನ್ನ ಗೋತ್ರ ಶ್ರೀವತ್ಸ ಅಲ್ವಾ? ಕೌಂಡಿನ್ಯ ಅಂತ ಬರ್ಸಿದೀನಿ, ತಪ್ಪಾ ಅಂತ. ಅದಕ್ಕೆ ಅಮ್ಮ

ಶಾರದೆಯ ಕೃಪೆ..

Image
ಕಣ್ಣು ತುಂಬಿತಲ್ಲೆ ತಾಯೆ ನಿನ್ನ ಕೃಪೆಯ ಜೇನ ಸವಿದು.. ಸ್ತುತಿಸೆ ಮಾತು ಬಾರದಿರಲು, ಕರುಣೆ ತೋರ್ದೆ ವಾಗ್ದೇವಿಯೇ, ಎನಗೆ.. ಕಣ್ಣು ತುಂಬಿತಲ್ಲೆ ತಾಯೇ... ಮುದದಿ ಕರೆಯೆ, ತ್ವರದಿ ಬಂದೆ. ವರವ ಬೇಡೆ, ಕರವ ಪಿಡಿದೆ. ಭರವಸೆಯ ಬೆಳಕನ್ನು ತುಂಬಿರೆ, ಜ್ಞಾನ ಭಕ್ತಿ ಹುರುಪಿನಿಂದ, ಕಣ್ಣು ತುಂಬಿತಲ್ಲೆ ತಾಯೆ... ರಾಗ ಲಹರಿಯ ಸ್ವರವು ನೀನು, ಜ್ಞಾನ ಸುಧೆಯ ಧೇನು ನೀನು, ವರ್ಣದಂದದಿ ರಾಗ ಸುಧೆಯ, ಬೆರೆಸಿ ನೀ ಎನ ಬಾಳ ಚಿತ್ರಿಸೆ.. ಕಣ್ಣು ತುಂಬಿತಲ್ಲೆ ತಾಯೆ.. ನಿನ್ನ ಕೃಪೆಯ ಜೇನ ಸವಿದು..

ನಾ ಮರೆಯಲಾರೆ......

Image
ನವ ಮಾಸಗಳ ಬೆಚ್ಚನೆಯ ಆಲಿಂಗನ ತೊರೆದು ನಡೆದ ಅಂದಿನ ದಿನ ಎದೆಯ ತುಂಬಿತ್ತು ಸಂತಸದ ವಿನಾ ನಿನ್ನ ಒಡಲ ಬಿಡುವ ನೋವಿನ ಆಕ್ರಂದನ. ನಾ ಅತ್ತರೂ ನೀ ನಕ್ಕ ಕೇವಲ 'ಆ' ಕ್ಷಣ ನನ್ನ ಉಲ್ಲಾಸಮಯ ಬಾಲ್ಯಕ್ಕಾಯಿತು ಸೋಪಾನ.. ಅಮೃತವಿತ್ತ ನಿನ್ನೆದೆಗೆ ಒದ್ದ ನನ ಪಾದಕೆ ನೀಡಿದೆ ನೀ ಹರ್ಷಮಯ ಚುಂಬನ.. ಪ್ರತಿದಿನದ ಆ ವಾತ್ಸಲ್ಯದ ರಾಗಕೆ ಮನಸ್ಸು ಜಾರುತ್ತಿತ್ತು ಸುಖ ನಿದ್ರೆಗೆ ಗೆಳೆಯರೊಡನೆ ಆಡಿದ ಆ ಜಗಳಕೆ ನೀ ಕೊಟ್ಟ ಪೆಟ್ಟು...ಇನ್ನೂ ನೋಯುತ್ತಿದೆ.. ಅಮ್ಮ, ನೀನುಣಿಸಿದ ಆ ತುತ್ತನು, ಕಥೆ ಹೇಳಿ,ಮಲಗಿಸಿ ನೀಡಿದ ಆ ಮುತ್ತನು, ಬಾಲ್ಯದ ಪ್ರತಿ ಅರೆ ಕ್ಷಣವನು ಚಿರನಿದ್ರೆಗೆ ಜಾರುವ ತನಕ ನಾ ಮರೆಯಲಾರೆ.....

ತಡಮಾಡದೆ ನೀ ಬಂದು ಸೇರು

Image
ತಡಮಾಡದೆ ನೀ ಬಂದು ಸೇರು ನಾ ಕಳುಹಿಸಿರುವೆ ನನ್ನ ಕನಸಿನ ತೇರು.. ತೀರದಾ ಒಲುಮೆಯ ದಾಹದಿ ತೀರವಾ ಸೇರುವ ತವಕ.. ನಡುವೆ ನಮ್ಮಯ ಮನದಿ ಭಾವ ಮಿಲನವಿರೆ ಪುಳಕ.. ಇಂತಿರೆ, ತಡಮಾಡದೆ ನೀ ಬಂದು ಸೇರು.. ತರಲು ನೀ ಬೇಸಿಗೆಯ ಬಿಸಿಲಲಿ ಹೃನ್ಮನ ತಣಿಸುವ ತಂಗಾಳಿ, ಚಿಂತೆಯ ಬೇಗೆಯಲಿ ನಾ ಬೇಯುತಿರೆ ಪ್ರೀತಿಯ ತಂಗಾಳಿಯೊಡನೆ... ತಡಮಾಡದೆ ನೀ ಬಂದು ಸೇರು.. ಮನದ ಅಲೆಗಳ ಘರ್ಷಣೆ ಏನಿತೆ ಇರಲಿ, ಬಾಳ ಸಾಗರದ ಪಯಣ ಬಹಳಷ್ಟಿಹುದು.. ನಾವಿಕನಾಗಿರುವೆ ಈ ನಮ್ಮ ಪಯಣಕೆ, ದೂರದಿಗಂತವ ಸೇರುವ ನಿಟ್ಟಿನೊಳು, ತಡಮಾಡದೆ ನೀ ಬಂದು ಸೇರು.. ನಾ ಕಳುಹಿಸಿರುವೆ ಹೂ ತೇರನು..

ಒಮ್ಮಿಂದೊಮ್ಮೆಲೆ ಬಂದು ಬಿಡು. .

Image
ಒಮ್ಮಿಂದೊಮ್ಮೆಲೆ ಬಂದು ಬಿಡು ಮುಚ್ಚು ಮರೆಯ ಆಟ ಬಿಟ್ಟು, ಛಾಯೆ ನಿನ್ನದು ನಾ ಕಂಡರೂ ಸೋತೆ ನಿನ್ನನು ಬಳಸಲು. . ಕಣ್ಣ ತಣಿವ ನಿನ್ನ ಅಂದವು ಬೀಸು ಗಾಳಿಯ ಸಖ್ಯ ಬೆಳೆಸಿ ಕಳುಹಿದ ತಂಗಾಳಿ ಮೈಯನು ಸೋಕಿ ಸುಳಿವನು ನೀಡಿತಾದರೂ ಸೋತೆ ನಿನ್ನನು ಬಳಸಲು. . ಕುಸುಮ ಕೋಮಲ ನಿನ್ನ ಪಾದವು ಮೆಲ್ಲ ನಡೆದು ಸ್ಪೃಶಿಸಿದಂತಹ , ಸದ್ದ ನಾನು ಕೇಳಿದಾದರೂ ಸೋತೆ ನಿನ್ನನು ಬಳಸಲು. . ನಾನು ಕಾಯುವ ಹೃದಯ ನಿನ್ನದು ನೀನೇ ಇರುವ ಹೃದಯ ನನ್ನದು, ನಿನ್ನ ಸನ್ನಿಧಿ ತೋರಲದರ ಮಿಡಿತವದು ಅನುರಣಿಸಿತಾದರೂ, ಸೋತೆ ನಿನ್ನನು ಬಳಸಲು. .

ಗುಟ್ಟು

Image
ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ.. ಪದಗಳಿಗೆ ನಿಲುಕದ, ಬಿಕ್ಕಟ್ಟಿಗೆ ಸಿಲುಕದ, ಇದಾವ ಬಗೆಯ ಗುಟ್ಟು.. ವರ್ಷದ ತುಮುಲವ ಹರ್ಷಿಸಿ ಕುಣಿಯುವ ಮಯೂರಿಗೆ ಬಾನು ಹೇಳಿದ ಗುಟ್ಟೋ? ವಸಂತನಾಗಮನಕೆ ನವ ಉಡುಗೆ ತೊಡುವ ರಮ್ಯ ಪ್ರಕೃತಿಗೆ ಋತು ಪಿಸುಗುಟ್ಟ ಗುಟ್ಟೋ? ಇದಾವ ಬಗೆಯ ಗುಟ್ಟು.. ಭವ್ಯಾಗಸದಿ ಸ್ವಚ್ಛಂದತೆಯಿಂ ಹಾರುವ ಖಗಕೆ ಮರಿಗಳು ಹಸಿವೆಂದು ಉಲಿಯುವ ಗುಟ್ಟೋ? ಕುಟಿಲ ಕಾನನಕೆ ಝುಳು-ಝುಳು ಎಂದು ಸರವು ಸ್ವರಗಳಿಂದ ಮೆಲ್ಲನೆ ನುಡಿಯುವ ಗುಟ್ಟೋ? ಇದಾವ ಬಗೆಯ ಗುಟ್ಟು.. ಪ್ರೇಮ ಕಾವ್ಯದ ಮೊದಲ ಅಕ್ಷರ ಬರೆಯುವ ತರುಣಿಗೆ ತರುಣನು ಹೇಳಿದ ಗುಟ್ಟೋ? ಮುಗ್ಧ ಹೃದಯವ ಹಿಗ್ಗಿಸುವಂತಹ ಪುಟ್ಟ ಕಂದನ ಸ್ನೇಹಮಯ ಗುಟ್ಟೋ? ಇದಾವ ಬಗೆಯ ಗುಟ್ಟು.. ಭವ್ಯ ಭವಿತ್ವದಿ ನಿರಂತರ ಯಾನಕೆ ಪೂರ್ಣ ವಿರಾಮದ ಸಂಭವದ ಗುಟ್ಟೋ? ಮದಮೋಹ ಮತ್ಸರವ ಬದಿಗಿಟ್ಟು ಸಾಧಿಸುವ ಇಹಪರ ಸಾಧನೆಯ ಮಾರ್ಗದ ಹಿಂದಿರುವ ಗುಟ್ಟೋ? ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ..