ತಡಮಾಡದೆ ನೀ ಬಂದು ಸೇರು

ತಡಮಾಡದೆ ನೀ ಬಂದು ಸೇರು
ನಾ ಕಳುಹಿಸಿರುವೆ ನನ್ನ ಕನಸಿನ ತೇರು..

ತೀರದಾ ಒಲುಮೆಯ ದಾಹದಿ
ತೀರವಾ ಸೇರುವ ತವಕ..
ನಡುವೆ ನಮ್ಮಯ ಮನದಿ
ಭಾವ ಮಿಲನವಿರೆ ಪುಳಕ..
ಇಂತಿರೆ, ತಡಮಾಡದೆ ನೀ ಬಂದು ಸೇರು..

ತರಲು ನೀ ಬೇಸಿಗೆಯ ಬಿಸಿಲಲಿ
ಹೃನ್ಮನ ತಣಿಸುವ ತಂಗಾಳಿ,
ಚಿಂತೆಯ ಬೇಗೆಯಲಿ ನಾ ಬೇಯುತಿರೆ
ಪ್ರೀತಿಯ ತಂಗಾಳಿಯೊಡನೆ...
ತಡಮಾಡದೆ ನೀ ಬಂದು ಸೇರು..

ಮನದ ಅಲೆಗಳ ಘರ್ಷಣೆ ಏನಿತೆ ಇರಲಿ,
ಬಾಳ ಸಾಗರದ ಪಯಣ ಬಹಳಷ್ಟಿಹುದು..
ನಾವಿಕನಾಗಿರುವೆ ಈ ನಮ್ಮ ಪಯಣಕೆ,
ದೂರದಿಗಂತವ ಸೇರುವ ನಿಟ್ಟಿನೊಳು,
ತಡಮಾಡದೆ ನೀ ಬಂದು ಸೇರು..
ನಾ ಕಳುಹಿಸಿರುವೆ ಹೂ ತೇರನು..


Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಗುಟ್ಟು

ಕನ್ಯೆಯನ್ನ ದಾನ ಮಾಡ್ಬೇಕಾ??