ಸ್ಮೃತಿಗೆ ಬಾರದು ನಿನ್ನ ಉಗಮ...
ಸ್ಮೃತಿಗೆ ಬಾರದು ನಿನ್ನ ಉಗಮ
ಪೂರ್ಣ ಚಿತ್ತ ಪ್ರೀತಿಯೇ..
ಎದೆಯ ಒಳಗೆ ಆಸೆ ಬಿತ್ತಿದ
ಭಾವಪೂರ್ಣ ಸ್ಫೂರ್ತಿಯೇ..
ನನ್ನ ತನುವರ್ಧದಲಿ ಪೂರ್ಣ ಮನ ತುಂಬಿರುವೆ
ನನ್ನೆಲ್ಲ ಭಾವಗಳ ಜೀವ ನೀನಾಗಿರುವೆ
ನೋಟದ ನೆರವಲ್ಲಿ ನನ್ನೆದೆಯ ಸೇರಿರುವೆ
ನೆತ್ತರದ ಕಣ ಕಣದಿ ಅನುರಕ್ತವಾಗಿರುವೆ..ಆದರೂ..
ಸ್ಮೃತಿಗೆ ಬಾರದು ನಿನ್ನ ಉಗಮ..
ಭಾವಲೋಕದಿ ನೀ ಎನ್ನ ಸಂಗಾತಿ
ಬಾಳ ಮಾಧುರ್ಯದ ಕೈಂಕರ್ಯದಿ ನೀನಾದೆ ಮೂಗುತಿ..
ಒರಟು ವೀಣೆಯೆಂಬ ನನ್ನಲ್ಲಿ ಮೀಟಿದೆ ನೀ ಇನಿದಾದ ತಂತಿ,
ನೇಸರನ ಪ್ರತಿ ಕಣದಲ್ಲಿ ಕಾಂತಿ ನೀ ಚೆಲ್ಲುತಿರುವಾಗ,
ಸ್ಮೃತಿಗೆ ಬಾರದು ನಿನ್ನ ಉಗಮ..
ನೂರು ಹೃದಯಗಳ ನಡುವೆ ನನ್ನೇಕೆ ಸೇರಿರುವೆ,
ಸೇರಿ ಅಂತರಂಗದಿ ಕೋಲಾಹಲವ ಏರಿಸಿರುವೆ,
ವರ್ಣ ಚಿತ್ತಾರಗಳ ಬಹುವಿಧದಿ ತುಂಬಿರುವೆ,
ಇನ್ನೆಂದೂ ತೊರೆಯದ ಧಮನಿಯಲಿ ನೀ ಬೆರೆತಿರುವಾಗ,
ಸ್ಮೃತಿಗೆ ಬಾರದು ನಿನ್ನ ಉಗಮ..
ಪೂರ್ಣ ಚಿತ್ತ ಪ್ರೀತಿಯೇ..
ಎದೆಯ ಒಳಗೆ ಆಸೆ ಬಿತ್ತಿದ
ಭಾವಪೂರ್ಣ ಸ್ಫೂರ್ತಿಯೇ..
ನನ್ನ ತನುವರ್ಧದಲಿ ಪೂರ್ಣ ಮನ ತುಂಬಿರುವೆ
ನನ್ನೆಲ್ಲ ಭಾವಗಳ ಜೀವ ನೀನಾಗಿರುವೆ
ನೋಟದ ನೆರವಲ್ಲಿ ನನ್ನೆದೆಯ ಸೇರಿರುವೆ
ನೆತ್ತರದ ಕಣ ಕಣದಿ ಅನುರಕ್ತವಾಗಿರುವೆ..ಆದರೂ..
ಸ್ಮೃತಿಗೆ ಬಾರದು ನಿನ್ನ ಉಗಮ..
ಭಾವಲೋಕದಿ ನೀ ಎನ್ನ ಸಂಗಾತಿ
ಬಾಳ ಮಾಧುರ್ಯದ ಕೈಂಕರ್ಯದಿ ನೀನಾದೆ ಮೂಗುತಿ..
ಒರಟು ವೀಣೆಯೆಂಬ ನನ್ನಲ್ಲಿ ಮೀಟಿದೆ ನೀ ಇನಿದಾದ ತಂತಿ,
ನೇಸರನ ಪ್ರತಿ ಕಣದಲ್ಲಿ ಕಾಂತಿ ನೀ ಚೆಲ್ಲುತಿರುವಾಗ,
ಸ್ಮೃತಿಗೆ ಬಾರದು ನಿನ್ನ ಉಗಮ..
ನೂರು ಹೃದಯಗಳ ನಡುವೆ ನನ್ನೇಕೆ ಸೇರಿರುವೆ,
ಸೇರಿ ಅಂತರಂಗದಿ ಕೋಲಾಹಲವ ಏರಿಸಿರುವೆ,
ವರ್ಣ ಚಿತ್ತಾರಗಳ ಬಹುವಿಧದಿ ತುಂಬಿರುವೆ,
ಇನ್ನೆಂದೂ ತೊರೆಯದ ಧಮನಿಯಲಿ ನೀ ಬೆರೆತಿರುವಾಗ,
ಸ್ಮೃತಿಗೆ ಬಾರದು ನಿನ್ನ ಉಗಮ..

Comments
Post a Comment