ಶಾರದೆಯ ಕೃಪೆ..



ಕಣ್ಣು ತುಂಬಿತಲ್ಲೆ ತಾಯೆ
ನಿನ್ನ ಕೃಪೆಯ ಜೇನ ಸವಿದು..
ಸ್ತುತಿಸೆ ಮಾತು ಬಾರದಿರಲು,
ಕರುಣೆ ತೋರ್ದೆ ವಾಗ್ದೇವಿಯೇ, ಎನಗೆ..
ಕಣ್ಣು ತುಂಬಿತಲ್ಲೆ ತಾಯೇ...


ಮುದದಿ ಕರೆಯೆ, ತ್ವರದಿ ಬಂದೆ.
ವರವ ಬೇಡೆ, ಕರವ ಪಿಡಿದೆ.
ಭರವಸೆಯ ಬೆಳಕನ್ನು ತುಂಬಿರೆ,
ಜ್ಞಾನ ಭಕ್ತಿ ಹುರುಪಿನಿಂದ,
ಕಣ್ಣು ತುಂಬಿತಲ್ಲೆ ತಾಯೆ...


ರಾಗ ಲಹರಿಯ ಸ್ವರವು ನೀನು,
ಜ್ಞಾನ ಸುಧೆಯ ಧೇನು ನೀನು,
ವರ್ಣದಂದದಿ ರಾಗ ಸುಧೆಯ,
ಬೆರೆಸಿ ನೀ ಎನ ಬಾಳ ಚಿತ್ರಿಸೆ..
ಕಣ್ಣು ತುಂಬಿತಲ್ಲೆ ತಾಯೆ..
ನಿನ್ನ ಕೃಪೆಯ ಜೇನ ಸವಿದು..

Comments

Popular posts from this blog

ತಡಮಾಡದೆ ನೀ ಬಂದು ಸೇರು

ಸ್ಮೃತಿಗೆ ಬಾರದು ನಿನ್ನ ಉಗಮ...