ನಾ ಮರೆಯಲಾರೆ......

ನವ ಮಾಸಗಳ ಬೆಚ್ಚನೆಯ ಆಲಿಂಗನ
ತೊರೆದು ನಡೆದ ಅಂದಿನ ದಿನ
ಎದೆಯ ತುಂಬಿತ್ತು ಸಂತಸದ ವಿನಾ
ನಿನ್ನ ಒಡಲ ಬಿಡುವ ನೋವಿನ ಆಕ್ರಂದನ.

ನಾ ಅತ್ತರೂ ನೀ ನಕ್ಕ ಕೇವಲ 'ಆ' ಕ್ಷಣ
ನನ್ನ ಉಲ್ಲಾಸಮಯ ಬಾಲ್ಯಕ್ಕಾಯಿತು ಸೋಪಾನ..
ಅಮೃತವಿತ್ತ ನಿನ್ನೆದೆಗೆ ಒದ್ದ ನನ ಪಾದಕೆ
ನೀಡಿದೆ ನೀ ಹರ್ಷಮಯ ಚುಂಬನ..


ಪ್ರತಿದಿನದ ಆ ವಾತ್ಸಲ್ಯದ ರಾಗಕೆ
ಮನಸ್ಸು ಜಾರುತ್ತಿತ್ತು ಸುಖ ನಿದ್ರೆಗೆ
ಗೆಳೆಯರೊಡನೆ ಆಡಿದ ಆ ಜಗಳಕೆ
ನೀ ಕೊಟ್ಟ ಪೆಟ್ಟು...ಇನ್ನೂ ನೋಯುತ್ತಿದೆ..


ಅಮ್ಮ, ನೀನುಣಿಸಿದ ಆ ತುತ್ತನು,
ಕಥೆ ಹೇಳಿ,ಮಲಗಿಸಿ ನೀಡಿದ ಆ ಮುತ್ತನು,
ಬಾಲ್ಯದ ಪ್ರತಿ ಅರೆ ಕ್ಷಣವನು
ಚಿರನಿದ್ರೆಗೆ ಜಾರುವ ತನಕ ನಾ ಮರೆಯಲಾರೆ.....

Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಗುಟ್ಟು

ಕನ್ಯೆಯನ್ನ ದಾನ ಮಾಡ್ಬೇಕಾ??