ಒಮ್ಮಿಂದೊಮ್ಮೆಲೆ ಬಂದು ಬಿಡು. .

ಒಮ್ಮಿಂದೊಮ್ಮೆಲೆ ಬಂದು ಬಿಡು
ಮುಚ್ಚು ಮರೆಯ ಆಟ ಬಿಟ್ಟು,
ಛಾಯೆ ನಿನ್ನದು ನಾ ಕಂಡರೂ
ಸೋತೆ ನಿನ್ನನು ಬಳಸಲು. .

ಕಣ್ಣ ತಣಿವ ನಿನ್ನ ಅಂದವು
ಬೀಸು ಗಾಳಿಯ ಸಖ್ಯ ಬೆಳೆಸಿ
ಕಳುಹಿದ ತಂಗಾಳಿ ಮೈಯನು
ಸೋಕಿ ಸುಳಿವನು ನೀಡಿತಾದರೂ
ಸೋತೆ ನಿನ್ನನು ಬಳಸಲು. .

ಕುಸುಮ ಕೋಮಲ ನಿನ್ನ ಪಾದವು
ಮೆಲ್ಲ ನಡೆದು ಸ್ಪೃಶಿಸಿದಂತಹ ,
ಸದ್ದ ನಾನು ಕೇಳಿದಾದರೂ
ಸೋತೆ ನಿನ್ನನು ಬಳಸಲು. .

ನಾನು ಕಾಯುವ ಹೃದಯ ನಿನ್ನದು
ನೀನೇ ಇರುವ ಹೃದಯ ನನ್ನದು,
ನಿನ್ನ ಸನ್ನಿಧಿ ತೋರಲದರ
ಮಿಡಿತವದು ಅನುರಣಿಸಿತಾದರೂ,
ಸೋತೆ ನಿನ್ನನು ಬಳಸಲು. .


Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಗುಟ್ಟು

ಕನ್ಯೆಯನ್ನ ದಾನ ಮಾಡ್ಬೇಕಾ??