ಎಲ್ಲುಂಟು??


ಕೇಳು ಖಗವೇ ಎನ್ನ ನೋವ,ಮನದಂಗಳದ ಅಳಲಾ..
ಪ್ರತಿ ನಿತ್ಯ ನಿನ್ನುಲಿಯ ನಾನಾಲಿಸುತಿರುವಾಗ, ಇಂದಾದರೂ ಕೇಳೆನ್ನ ಕರೆಯಾ..

ನಿನಗೆ ರೆಕ್ಕೆಗಳುಂಟು, ಹಾರುವಾ ಬಲವುಂಟು,
ಗೂಡ ಕಟ್ಟುವ ಸಾಮರ್ಥ್ಯವುಂಟು, ನೋವ ಕೇಳ್ವ ನಿನ್ನವರುಂಟು,
ನಿನ್ನ ಕುಡಿಗಳ ಸಾಕುವ ಚೈತನ್ಯವುಂಟು,
ಈ ಉಂಟುಗಳ ಬಯಕೆ ನನಗೂ ಉಂಟು.

ನನ್ನ ಮನಸಿಗೂ ರೆಕ್ಕೆಗಳುಂಟು,
ಸ್ವಚ್ಛಂದತೆಯ ಕೊರತೆಯುಂಟು,
ಗೂಡ ಗೋಡೆಗಳ ಅಳಿವಿನ ಅಂಜಿಕೆಯುಂಟು,
ಅಣುಕುಗಳ ಸಾಂಗತ್ಯವುಂಟು, ಇನ್ನು ನನ್ನವರೆಲ್ಲುಂಟು??




Comments

Popular posts from this blog

ಶಾರದೆಯ ಕೃಪೆ..

ತಡಮಾಡದೆ ನೀ ಬಂದು ಸೇರು

ಗುಟ್ಟು